ಶ್ರೀ ಕಾಳಿಕಾಂಬಾ ಸೇವಾ ಸಮಿತಿ, 43ನೇ ವರ್ಷದ ಗುರ್ಜಿ ದೀಪೋತ್ಸವ
ಮಂಗಳೂರು. ಇಲ್ಲಿನ ರಥಬೀದಿ
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ನಡೆಸಲ್ಪಡುವ *43ನೇ ವರ್ಷದ ಗುರ್ಜಿಯಲ್ಲಿ ದೀಪಾರಾಧನೋತ್ಸವವು ನವಂಬರ್ 6 ರಂದು ಸಂಭ್ರಮದಿಂದ ನಡೆಯಿತು. ಶ್ರೀ ಕಾಳಿಕಾಂಬಾ, ಶ್ರೀ ಸುಬ್ರಮಣ್ಯ ದೇವರ ಉತ್ಸವ ಬಲಿ ನಡೆದು, ಲಾಲಾಕಿಯಲ್ಲಿ ದೇವರ ಉತ್ಸವವು ತರಕಾರಿ ಹಣ್ಣು ಹಂಪಲು ಪುಷ್ಪ ಗಳಿಂದ ಅಲಂಕ್ರತವಾದ ಗುರ್ಜಿ ಬಳಿ ತೆರಳಿ ಕ್ಷೇತ್ರದ ತoತ್ರಿಗಳಾದ ಬ್ರಹ್ಮ ಶ್ರೀ ಲಕ್ಷ್ಮೀಕಾಂತ ಶರ್ಮಾರ ಆಚಾರ್ಯತ್ವದಲ್ಲಿ
ವಿಶೇಷ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ, ಚಿಲಿಂಬಿ,
ಶ್ರೀಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ರಾದ ಜೆ ವಿವೇಕ್, ಸರ್ವ ಸದಸ್ಯರು ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.
ಗುರ್ಜಿಗೆ ಅಲಂಕರಿಸಿದ ತರಕಾರಿ, ಹಣ್ಣು ಹಂಪಲನ್ನು ಭಕ್ತಾದಿಗಳ ಸಮಕ್ಷಮ ಬಹಿರಂಗವಾಗಿ ಎಲಮ್ ಮಾಡಲಾಯಿತು.
ವರದಿ : ಸುಜೀರ್ ವಿನೋದ್