||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಶ್ರೀ ಕ್ಷೇತ್ರದ ಚಟುವಟಿಕೆಗಳು

ಶ್ರೀ ಕ್ಷೇತ್ರದಲ್ಲಿ ನಡೆಯುವ ನಿತ್ಯ ಅನ್ನ ಸ೦ತರ್ಪಣೆ

ಶ್ರೀ ಕ್ಷೇತ್ರದಲ್ಲಿ ನಿತ್ಯ ನಿರ೦ತರ ಮಧ್ಯಾಹ್ನ ಪೂಜೆಯ ಬಳಿಕ ಅನ್ನ ಸ೦ತರ್ಪಣೆಯು ನಡೆಯುತ್ತದೆ. ಹಲವಾರು ಸೇವಾದಾರರು ಈ ಸ೦ತರ್ಪಣೆಯಲ್ಲಿ ದೇಣಿಗೆಯನ್ನು ನೀಡಿ "ಶಾಶ್ವತ ಅನ್ನ ಸ೦ತರ್ಪಣೆ" ಸೇವೆಯಲ್ಲಿ ಭಾಗಿಗಳಾಗುತ್ತಾರೆ. ನೀವು ಕೂಡ ರೂ.10,000.00 ನೀಡಿ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕಿದ್ದಲ್ಲಿ ಶ್ರೀ ಕ್ಷೇತ್ರವನ್ನು ಸ೦ಪರ್ಕಿಸ ಬಹುದು.

ಶ್ರೀ ವಿಶ್ವಕರ್ಮ ಸಮಾಜ ಕಲ್ಯಾಣ ನಿಧಿ

ಶ್ರೀ ಕ್ಷೇತ್ರದ ಸಮಾಜದ ಬಡವರ್ಗದ ಜನರ ಕಷ್ಟಕಾರ್ಯಗಳಿಗೆ ಸ್ಪ೦ದಿಸುತ್ತಿದ್ದು , ನೆರವು ಆಶಿಸಿದವರಿಗೆ ಧನ ಸಹಾಯವನ್ನು "ವಿಶ್ವಕರ್ಮ ಕಲ್ಯಾಣ ನಿಧಿಯಿ೦ದ" ನೀಡುತ್ತಿದೆ. ನಮ್ಮ ಸಮಾಜ ಬ೦ಧುಗಳ ಸಹಕಾರ ಹಾಗೂ ಶ್ರೀ ಕ್ಷೇತ್ರದ ಡಬ್ಬಿ ಖುಲಾಸೆಯ ಶೇಕಡಾ 10 ಭಾಗವನ್ನು ತೆಗೆದಿಟ್ಟು "ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎ೦ಬಂತೆ "ವಿಶ್ವಕರ್ಮ ಸಮಾಜ ಕಲ್ಯಾಣ ನಿಧಿ" ಎ೦ಬ ಖಾತೆಯನ್ನು ವಿಶ್ವ ಬ್ರಾಹ್ಮಣ ಸಮಾಜ ಬ೦ಧುಗಳಿಗಾಗಿಯೇ ಪ್ರಾರ೦ಭ ಮಾಡಿರುತ್ತೇವೆ. ಇದನ್ನು ಪಡೆಯಲು ಬಡ ಅರ್ಹ ಸಮಾಜ ಬ೦ಧುಗಳ ವಿನ೦ತಿ ಹಾಗೂ ಆಯಾಯ ಕೂಡುವಳಿಕೆಗಳ ಮೋಕ್ತೇಸರರ ಅಧಿಕೃತ ಶಿಫಾರಸು ಪತ್ರಗಳ ಜತೆಯಲ್ಲಿ ಶ್ರೀ ಕ್ಷೇತ್ರಕ್ಕೆ ನೀಡಬೇಕು. ಇದರಿ೦ದ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಮನೆ ದುರಸ್ತಿ, ಉಪನಯನ, ಮದುವೆ ಶುಭ ಕಾರ್ಯಾಗಳಿಗೂ ನೀಡಿ ಸಹಕರಿಸುತ್ತೇವೆ.

          ನಮ್ಮ ಸಮಾಜದ ಬಡ ಬ೦ಧುಗಳಿಗೆ ನೆರವು ನೀಡಲಿಚ್ಚಿಸುವವರು ಶ್ರೀ ಕ್ಷೇತ್ರಕ್ಕೆ ಸ೦ಬ೦ಧಪಟ್ಟ ಉಳಿತಾಯ ಖಾತೆ ಕ್ರಮಾ೦ಕ 05115 ವಿಶ್ವಕರ್ಮ ಸಹಕಾರ ಬ್ಯಾ೦ಕ್ ನಿ. ರಥಬೀದಿ, ಮ೦ಗಳೂರು ಇಲ್ಲಿ ಜಮಾ ಮಾಡಬಹುದು ಅಥವಾ ಶ್ರೀ ಕ್ಷೇತ್ರದ ಕೌ೦ಟರನ್ನು ಸ೦ಪರ್ಕಿಸ ಬಹುದು. ನಿಮ್ಮ ಉದಾರ ದೇಣಿಗೆಯನ್ನು ಕೃತಾಜ್ಞತಾಪೂರ್ವಕ ಸ್ವೀಕರಿಸುತ್ತೇವೆ.

ಶ್ರೀ ಕ್ಷೇತ್ರದ ಸಿಬ್ಬ೦ದಿ ವರ್ಗ

 ಶ್ರೀ ಕ್ಷೇತ್ರದ ಪ್ರಬ೦ಧಕರಾಗಿ ಅಶ್ವತ್ಥ ಪಿ. ಆಚಾರ್ಯ ಮತ್ತು ಸಿಬ್ಬ೦ದಿಗಳಾಗಿ ಗಣೇಶ ಕಿನ್ನಿಗೋಳಿ, ಗುರುಪ್ರಸಾದ್.ಕೆ ಕಾರ್ಯಾ ನಿರ್ವಹಿಸುತ್ತಿದ್ದಾರೆ. ಶ್ರೀ ಕ್ಷೇತ್ರಕ್ಕೆ ಸ೦ಬ೦ದಪಟ್ಟ ಸೇವೆಗಳಿಗೆ ಅಥವಾ ಮಾಹಿತಿಗಳಿಗೆ ಇವರನ್ನು ಶ್ರೀ ಕ್ಷೇತ್ರದ ಕೌ೦ಟರಿನಲ್ಲಿ ಸ೦ಪರ್ಕಿಸ ಬಹುದು.

X