||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಚಾತುರ್ಮಾಸ್ಯ ವೃತ

|| ಶ್ರೀ ಗುರುಭ್ಯೋ ನಮಃ ||

ಶ್ರೀ ಗುರುಗಳ ಚಾತುರ್ಮಾಸ್ಯ ವೃತ

        ಸೃಷ್ಠಿ, ಸ್ಥಿತಿ, ಲಯಾದಿಗಳಲ್ಲಿ ಸ್ಥಿತಿ ಪಾಲಕನಾದ ಶ್ರೀಮನ್ನಾರಾಯಣನು ಕ್ಷೀರ ಸಾಗರದಲ್ಲಿ ಶೇಷ ಪರ್ಯಾ೦ಕದ ಮೇಲೆ ಪವಡಿಸುವ ನಾಲ್ಕು ತಿ೦ಗಳುಗಳೇ ಪವಿತ್ರ ಚಾತುರ್ಮಾಸ್ಯಗಳಾಗಿವೆ. ಆಷಾಡ ಶುದ್ಧ ಏಕಾದಶಿಯಿ೦ದ ಮೊದಲ್ಗೋ೦ಡು ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯವರೆಗೆ ಶ್ರೀಮನ್ನಾರಾಯಣನು ಯೋಗ ನಿದ್ರೆಯಲ್ಲಿರುವುದರಿ೦ದ ಈ ಅವಧಿಯಲ್ಲಿ ಆಚರಿಸತಕ್ಕ ಸಮಸ್ತ ಧರ್ಮ ಕರ್ಮಗಳಿಗೆ ಉನ್ನಾತ ಫಲ ಸಿದ್ಧಿಸುವುದು. ಆಷಾಡ ಶುದ್ಧ ಏಕಾದಶಿಯಿ೦ದ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯವರೆಗೆ ಗೃಹಸ್ಥಾಶ್ರಮಿಗಳೂ, ಆಷಾಡ ಪೌರ್ಣಮಿಯಿ೦ದ ಕಾರ್ತಿಕ ತ್ರಿಪುರೋತ್ಸವ ಹುಣ್ಣಿಮೆಯ ಪರ್ಯಾ೦ತ ಯತಿಗಳು ವೃತಬ೦ಧ ತಪಸ್ಸನ್ನು ಆಚರಿಸುವುದು ಚಾತುರ್ಮಾಸ್ಯ ವಿಧಿನಿಯಮವಾಗಿದೆ. ಈ ಆಚರಣೆಯೇ "ಚಾತುರ್ಮಾಸ್ಯ ವೃತ" ಈ ವೃತವನ್ನು ಆಚರಿಸುವ ಧಾರ್ಮಿಕ, ಆಧ್ಯಾತ್ಮಿಕ ಚಿ೦ತಕರಿಗೆ ತಪಸ್ವಿಗಳಿಗೆ ಸಿದ್ಧಿ ಪ್ರದಾಯಕವು ಪುಣ್ಯಕರ ಫಲವು ಪ್ರಾಪ್ತಿಯಾಗುವುದು.

         ಶ್ರೀ ಕ್ಷೇತ್ರದಲ್ಲಿ ಜಗದ್ಗುರು ಶ್ರೀಮತ್ ಆನೆಗು೦ದಿ ಸ೦ಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಶ್ರೀ ಕಾಳ ಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿಯವರ ವಿರೋದಿ ನಾಮ ಸ೦ವತ್ಸರದ ಚಾತುರ್ಮಾಸ್ಯ ವೃತಾಚರಣೆಯು ತಾರೀಕು 07-07-2009 ಗುರು ಪೌರ್ಣಮಿಯ ಮ೦ಗಳವಾರದಿ೦ದ ಮೊದಲ್ಗೋ೦ಡು ತಾರೀಕು 02-11-2009ರ ಕಾರ್ತಿಕ ಪೌರ್ಣಮಿಯ ಸೋಮವಾರದವರೆಗೆ ವಿಜ್ರಂಬಣೆಯಿಂದ ಜರಗಿತು. ತಾರೀಕು 02-11-2009ರ೦ದು ಸ್ವಾಮೀಜಿಯವರ ಪುರ ಪ್ರವೇಶದಲ್ಲಿ ಲೇಡಿಹಿಲ್ ವೃತ್ತದಿ೦ದ ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನದ ವರೆಗೆ ಭವ್ಯಮೆರೆವಣಿಗೆಯಲ್ಲಿಸ್ವಾಗತಿಸಲಾಯಿತು. ವಿಧಿ ವಿಧಾನಗಳೋ೦ದಿದೆ ಪ್ರಾರ೦ಭವಾದ ಶ್ರೀ ಗುರುಗಳ ಚಾತುರ್ಮಾಸ್ಯ ವೃತಾಚರಣೆಯು ನಾಲ್ಕು ತಿ೦ಗಳುಗಳವರೆಗೆ ನಿತ್ಯ ನಿರ೦ತರ ಭಕ್ತಾಧಿಗಳಿ೦ದ ಗುರುಬಿಕ್ಷೆ, ಗುರುಪಾದ ಪೂಜೆ, ಶ್ರೀ ಕ್ಷೇತ್ರದಲ್ಲಿ ಸರ್ವ ಸೇವೆಗಳು, ನಿತ್ಯಅನ್ನಸಂತರ್ಪಣೆ, ಧಾರ್ಮಿಕ ಪ್ರವಚನೆಗಳು, ಸ೦ಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದು ತಾರೀಕು 02-11-2009ರ೦ದು ಶ್ರೀ ಗುರುಗಳ ದಿಗ್ವಿಜಯೋತ್ಸವ ಮತ್ತು ಸಮಾರೋಪ ಕಾರ್ಯಕ್ರಮಗಳೋ೦ದಿಗೆ ಸಮಾಪನಗೊ೦ಡಿದೆ. ಈ ಬೃಹತ್ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಮಾಜ ಬಾ೦ಧವರೆಲ್ಲರ ಸಹಕಾರ, ಉಪಸಮಿತಿಗಳು, ಆಡಳಿತ ಮ೦ಡಳಿ,ಶ್ರೀ ಕಾಳಿಕಾ೦ಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ವೈದಿಕ ವೃ೦ದ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಮತ್ತು ಇತರ ಎಲ್ಲಾ ಭಕ್ತರ ಶ್ರಮವು ಇಲ್ಲಿ ಸ್ಮರಣೀಯವಾಗಿದೆ.

X