ಸದ್ಭಕ್ತ ಮಹಾಶಯರೇ,
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕಾರ್ತಿಕ ಶುದ್ಧ ಪಾಡ್ಯ ತಾ. 26-10-2022 ಬುಧವಾರ ಮೊದಲ್ಗೊಂಡು ತಾ. 03-11-2022ನೇ ಗುರುವಾರದವರೆಗೆ ಸಾಯಂಕಾಲ 06:00 ರಿಂದ 07:30 ವರೆಗೆ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠಾಧೀಶರಾದ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ನಾಗಲಿಂಗ ಸ್ವಾಮಿ ಗುರುಮಠದಲ್ಲಿ ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಭಜನಾ ಮಹೋತ್ಸವ ಕಾರ್ಯಕ್ರಮವು ನಡೆಯಲಿರುವುದು.
ತಾ. 04-11-2022ನೇ ಶುಕ್ರವಾರ ಏಕಾದಶೀ ದಿನ ಸೂರ್ಯೋದಯದಿಂದ ಆರಂಭವಾಗಿ ತಾ.05-11-2022ನೇ ಶನಿವಾರ ಸೂರ್ಯೋದಯಕ್ಕೆ ಮಂಗಳವಾಗುವ ಏಕಾಹ ಭಜನೆ
ಮಹಾಜನರ ಹಾಗೂ ಭಜನಾ ಮಂಡಳಿಯವರ ಸಹಕಾರದಿಂದ ಜರಗಬೇಕಾದ ಪ್ರಯುಕ್ತ ತಾವೆಲ್ಲರೂ ಆಗಮಿಸಿ ತನು-ಮನ-ಧನಗಳಿಂದ ಸಹಾಭಾಗಿಗಳಾಗಿ ಈ ಭಗವತ್ಸೇವೆಯನ್ನು ಯಶಸ್ವಿಗೊಳಿಸಬೇಕಾಗಿ ಅಪೇಕ್ಷಿಸುತ್ತೇವೆ. ಕ್ಷೇತ್ರದ ಆಡಳಿತ ಪರವಾಗಿ
ಕೆ. ಕೇಶವ ಆಚಾರ್ಯ
ಆಡಳಿತ ಮೊಕ್ತೇಸರರು,
ಬೆಳುವಾಯಿ ಸುಂದರ ಆಚಾರ್ಯ
2ನೇ ಮೊಕ್ತೇಸರರು,
ಎ. ಲೋಕೇಶ್ ಆಚಾರ್ಯ
3ನೇ ಮೊಕ್ತೇಸರರು