ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸರ್ವ ಕ್ರತು ಫಲಪ್ರದ ಶಾಕಲ ಋಕ್ಸOಹಿತಾ ಯಾಗ 28.10.2022 ರ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ಅನುಗ್ರಹದೊಂದಿಗೆ ಕ್ಷೇತ್ರದ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿದೆ.
ಬೆಳಿಗ್ಗೆ
ಸಾಮೂಹಿಕ ಪ್ರಾರ್ಥನೆ ನಡೆದು ಮಹಾಸಂಕಲ್ಪ, ಗುರುಗಣಪತಿ ಪೂಜೆ, ಪುಣ್ಯಾಹ, ನಾಂದಿ, ಋತ್ವಿಗ್ವರಣ, ಕೌತುಕಬಂಧನ, ಕಲಶ ಸ್ಥಾಪನೆ, ಅಗ್ನಿ ಜನನ, ಸಂಹಿತಾ ಯಾಗಾರಂಭಗೊಂಡಿತು
ಕ್ಷೇತ್ರದ ಕೆ. ಕೇಶವ ಆಚಾರ್ಯ ಆಡಳಿತ ಮೊಕ್ತೇಸರ್, 2ನೇ ಮೊಕ್ತೇಸರ್ ಶ್ರೀ ಸುಂದರ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರ್ ಶ್ರೀ ಎ ಲೋಕೇಶ್ ಆಚಾರ್ಯ, ಚಿಲಿಂಬಿ, ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಸದಸ್ಯರು, ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು. ವರದಿ : ಸುಜೀರ್ ವಿನೋದ್