ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸರ್ವಕ್ರತು ಫಲಪ್ರದ “ಶಾಕಲ ಋಕ್ಸOಹಿತಾ ಯಾಗ” 28.10.2022 ರಿಂದ 03.11.2022
ಮಂಗಳೂರು : ಇಲ್ಲಿನ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸರ್ವಕ್ರತು ಫಲಪ್ರದ ಶಾಕಲ ಋಕ್ಸOಹಿತಾ ಯಾಗ 28.10.2022 ರಿಂದ 03.11.2022 ರ ತನಕ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ಅನುಗ್ರಹದೊಂದಿಗೆ ಕ್ಷೇತ್ರದ ಸಾನಿಧ್ಯ ವೃದ್ಧಿ, ಸಮಾಜದ ಶ್ರೇಯೋಭಿವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮಿಕಾಂತ ಶರ್ಮಾರ ಉಪಸ್ಥಿತಿಯಲ್ಲಿ ನಡೆಯಲಿದೆ. .
28.10.2022 ಶುಕ್ರವಾರಬೆಳಿಗ್ಗೆ ಗಂಟೆ 7 ಕ್ಕೆ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಗುರುಗಣಪತಿ ಪೂಜೆ, ಪುಣ್ಯಾಹ, ನಾಂದಿ, ಋತ್ವಿಗ್ವರಣ, ಕೌತುಕಬಂಧನ, ಕಲಶ ಸ್ಥಾಪನೆ, ಅಗ್ನಿ ಜನನ, ಸಂಹಿತಾ ಯಾಗಾರಂಭ. ಮಧ್ಯಾಹ್ನ ಗಂಟೆಗೆ 1 ಕ್ಕೆ ಲಘು ಪೂರ್ಣಾಹುತಿ . ಸಂಜೆ ಗಂಟೆ 6 ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ.
ದಿನಾಂಕ 29.10.22ನೇ ಶನಿವಾರದಿಂದ 2.11.22 ಬುಧವಾರ ತನಕ ಪ್ರಾತಃ ಕಾಲ 7 ಗಂಟೆಗೆ ಸಂಹಿತಾ ಯಾಗಾರಂಭ ಮಧ್ಯಾಹ್ನ ಗಂಟೆ 1ಕ್ಕೆ ಲಘು ಪೂರ್ಣಾಹುತಿ ಸಂಜೆ ಗಂಟೆ 6 ಕ್ಕೆ ಮಹಾ ಪೂಜೆ, ಅಷ್ಟಾವಧಾನ ಸೇವೆ.
ದಿನಾಂಕ 3.11.2022ನೇ ಗುರುವಾರ ಪ್ರಾತಃಕಾಲ ಗಂಟೆ 7 ಕ್ಕೆ ಸಂಹಿತಾ ಯಾಗಾರಂಭ. ಬೆಳಿಗ್ಗೆ ಗಂಟೆ 10.30 ಕ್ಕೆ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪುರಸ್ಸರ ವಸೋರ್ಧಾರ, ಮಹಾಪೂಜೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ.
*ಬೆಳಿಗ್ಗೆ ಗಂಟೆ 11.30 ಕ್ಕೆ ಸಭಾ ಕಾರ್ಯಕ್ರಮ : ದಿವ್ಯ ಸಾನಿಧ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ,
ಸಮಾರಂಭದ ಅಧ್ಯಕ್ಷತೆ ಕೆ. ಕೇಶವ ಆಚಾರ್ಯ ಆಡಳಿತ ಮೊಕ್ತೇಸರ್ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು. ಮುಖ್ಯ ಅತಿಥಿಗಳು : *ಮಹಾ ಮಹೋಪಾಧ್ಯಯ ವಿದ್ವಾನ್ ಪಂಜ ಭಾಸ್ಕರ ಭಟ್ಟ, ಘನ ಉಪಸ್ಥಿತಿ : ವಿದ್ವಾನ್ ಡಾ || ಸತ್ಯಕೃಷ್ಣ ಭಟ್ಟ, ವಿದ್ವಾನ್ ಚಂದುಕೂಡ್ಲು ಬಾಲಚಂದ್ರ ಭಟ್ಟ, ಸುಂದರ ಆಚಾರ್ಯ ಕ್ಷೇತ್ರದ 2ನೇ ಮೊಕ್ತೇಸರ್, ಎ ಲೋಕೇಶ್ ಆಚಾರ್ಯ ಚಿಲಿಂಬಿ 3ನೇ ಮೊಕ್ತೇಸರ್.
ಕ್ಷೇತ್ರಕ್ಕೆ ಒಳಪಟ್ಟಿರುವ 8 ಪೇಟೆ ಹತ್ತು ಸಮಸ್ತರು, ಸಮಾಜ ಬಾಂಧವರು ಈ ಮಂಗಲಪ್ರದ ಕಾರ್ಯಕ್ರಮದಲ್ಲಿ ತನು -ಮನ -ಧನದೊಂದಿಗೆ ಸಹಕರಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಕಟಣೆ ತಿಳಿಸಿದೆ.