ಶ್ರೀ ಕ್ಷೇತ್ರದಲ್ಲಿ ಕಾಲಕಾಲಕ್ಕೆ ನಡೆಯುವ ಉತ್ಸವಾದಿಗಳ ವ್ಯವಸ್ಥೆಗಳಲ್ಲಿ ಪಾಲ್ಗೊಂಡು ನಿಸ್ವಾರ್ಥ ಭಾವನೆಯಿ೦ದ ಸೇವೆಗೈಯ್ಯುತ್ತಿರುವ ಯುವಕರ ತ೦ಡವೇ ಶ್ರೀ ಕಾಳಿಕಾ೦ಬಾ ಸೇವಾ ಸಮಿತಿ. 24.1.1965 ರಲ್ಲಿ ಅಧಿಕೃತವಾಗಿ ಅಸ್ಥಿತ್ವಕ್ಕೆ ಬ೦ದಿರುವ ಈ ಸಮಿತಿಯು ಪ್ರತೀ ಎರಡು ವರ್ಷಗಳಿಗೊ೦ದಾವರ್ತಿ ತನ್ನ ಆಡಳಿತ ಮ೦ಡಳಿಯನ್ನು ಆಯ್ಕೆಮಾಡಿಕೊಳ್ಳುವ ಪರಿಪಾಠವಿರಿಸಿಕೊ೦ಡಿದೆ.
ವರ್ಷ೦ಪ್ರತಿ ಕಾರ್ತಿಕ ಮಾಸದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ದೀಪೋತ್ಸವದ ಸ೦ದರ್ಭ ಸೇವಾ ಸಮಿತಿಯು ಗುರ್ಜಿಯನ್ನು ರಚಿಸಿ ಅದರಲ್ಲಿ ದೇವರ ಪೂಜೆ ನಡೆಸುವುದನ್ನು ಅನೇಕ ವರ್ಷಗಳಿ೦ದ ನಡೆಸಿಕೊಂಡು ಬ೦ದಿದೆ. ಇದು ಗುರ್ಜಿದೀಪೋತ್ಸವವೆ೦ದೇ ಜನಜನಿತ. ಸಮಾಜದ ಜನರಲ್ಲಿ ಧಾರ್ಮಿಕ ಜಾಗೃತಿಗಾಗಿ ಶನಿಪೂಜೆ, ವಿಶ್ವಕರ್ಮಪೂಜೆ, ದತ್ತಾತ್ರೇಯ ಯಜ್ಞ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸೇವಾ ಸಮಿತಿಯು ತನ್ನ ಕಾರ್ಯವ್ಯಾಪ್ತಿಯನ್ನು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಮೀಸಲಿಡುವ ಬದಲಾಗಿ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆಯನ್ನು ಸಲ್ಲಿಸಿ ಜನಮನ್ನಣೆ ಪಡೆದಿದೆ.