||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಗುರು ಪರಂಪರೆ

ಶ್ರೀ ಶ್ರೀ ಶ್ರೀ ಆದಿ ಶ೦ಕರಾಚಾರ್ಯ ಮಹಾಸ್ವಾಮೀಜಿ

ಶ್ರೀ ಶ್ರೀ ಶ್ರೀ ನಾಗಧರ್ಮೇಂದ್ರ ಮಹಾಸ್ವಾಮೀಜಿ

ಶ್ರೀ ಶ್ರೀ ಶ್ರೀ ಕಾಳ ಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿ

ವಿಶ್ವಬ್ರಾಹ್ಮಣರ ಗುರುಪರಂಪರೆ ಕಾಶಿಯಿಂದ ಆರಂಭಿಸಿ ನಮ್ಮ ಪುರಾತನ ಪಂಚ ಪೀಠಗಳಲ್ಲಿ ಒಂದಾದ ಶ್ರೀಮತ್ ಆನೆಗುಂದಿ ಸಂಸ್ಥಾನ ಪೀಠದಲ್ಲಿ 1905 ರ ವರೆಗೆ ಶ್ರೀ ಶ್ರೀ ಶ್ರೀ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಪೀಠಸ್ಥರಾಗಿದ್ದರು ಶ್ರೀ ಶ್ರೀ ಶ್ರೀ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ಕಟಪಾಡಿಯಲ್ಲಿ ವೃ೦ದಾವನಸ್ಥರಾದ ಮೇಲೆ ನಮ್ಮ ಗುರು ಪೀಠವು ಸುಮಾರು 100 ವರ್ಷಗಳ ವರೆಗೆ ಬರಿದಾಗಿತ್ತು.

 ಶ್ರೀ ಗುರು ಪರಂಪರೆಯ ಕೃಪಾಶೀರ್ವಾದ ಮತ್ತು ದೈವಾನುಗ್ರಹದಿಂದ 2005 ರ ಫೆಬ್ರವರಿ ಯಲ್ಲಿ ಆನೆಗುಂದಿ ಸಂಸ್ಥಾನದ ಪರಂಪರೆಯ ಬೆಳಗುತ್ತಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕಾಳ ಹಸ್ತೇ೦ದ್ರ ಸರಸ್ವತಿ ಮಹಾಸ್ವಾಮೀಜಿಯವರು ೧೦೮ ಶ್ರೀ ನಾಗಧರ್ಮೇಂದ್ರ ಸರಸ್ವತಿ ತೀರ್ಥರ ವೃ೦ದಾವನದಲ್ಲಿ ಶ್ರೀ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಸಮ್ಮುಖದಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡಿರುತ್ತಾರೆ . ಶ್ರೀ ಗುರುಧ್ಯಾನ ಮಂದಿರದಲ್ಲಿ ಉಪಸ್ಥಿತರಿದ್ದು ನಿತ್ಯಾನುಷ್ಠಾನ ಧ್ಯಾನ ಪ್ರವಚನ ಉಪನ್ಯಾಸಗಳಿಂದ ವಿಶ್ವಬ್ರಾಹ್ಮಣರ ಸಮಾಜವನ್ನು ಹರಸುತ್ತಾ ಬಂದಿದ್ದಾರೆ . ಭಕ್ತರ ಮನೆ ಮನೆ ಭೇಟಿ ಇತರ ಕ್ಷೇತ್ರಗಳಲ್ಲಿ ಚಾತುರ್ಮಾಸ್ಯ ವೃತಾಚರಣೆ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಸುಧಾರಣೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

 2010 ಎಪ್ರಿಲ್ ನಲ್ಲಿ ಶೃ೦ಗೇರಿ ಪೀಠಾಧಿಪತಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರಿಂದ ಶ್ರೀ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀ ಶ್ರೀ ಕಾಳ ಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿಯವರಿಗೆ ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು .

          ಪ್ರಸ್ತುತ ಕಾಪುವಿನ ಪಡುಕುತ್ಯಾರಿನಲ್ಲಿ ನೂತನ ಮಠದ ಭೂಮಿ ಪೂಜೆ, ಭೂದಾನ ಕಾರ್ಯಕ್ರಮ ಶಿಲಾನ್ಯಾಸಗಳು ನೆರವೇರಿದ್ದು ಸಮಾಜ ಬಾ೦ದವರ ಸಹಕಾರದಿಂದ ಈ ಬೃಹತ್ ಕಾರ್ಯ ಯೋಜನೆ ಸಾಕಾರಗೊಳ್ಳಬೇಕಾಗಿದೆ. ವಿಶ್ವಬ್ರಾಹ್ಮಣ ಸಮಾಜವನ್ನು ಸಂಸ್ಕಾರವಂತರನ್ನಾಗಿಸಿ ಸಮಾಜವನ್ನು ಬೆಳಗುವ ಪುಣ್ಯಸ್ಥಳ ಇದಾಗಲಿ.

X