ಭಜನಾಸಕ್ತರು ಸೇರಿಕೊ೦ಡು ರಚಿಸಿರುವ ಸಮಿತಿಯೇ ಶ್ರೀ ಕಾಳಿಕಾ೦ಬಾ ವಿನಾಯಕ ಭಜನ ಸಮಿತಿ. ಶ್ರೀ ಗುರುಮಠದಲ್ಲಿ ಪ್ರತಿ ಶುಕ್ರವಾರ ನಿರ೦ತರವಾಗಿ ಭಜನೆಯನ್ನು ನಡೆಸುತಿದ್ದು ಸಮಾಜದ ಸೇವಾದರರನ್ನು ಜತೆ ಗೂಡಿಸಿಕೊ೦ಡು ಊರಪರವೂರಿನ ಕ್ಷೇತ್ರದಲ್ಲಿ, ಸಮಾಜದಲ್ಲಿ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸುತ್ತಾರೆ.
ಪ್ರತಿ ವರ್ಷ ಶ್ರೀ ಗುರುಮಠದಲ್ಲಿ ಏಕಾಹ ಭಜನೆ ಕಾರ್ತಿಕ ಶುದ್ಧ ಏಕಾದಶಿ ಸೂರ್ಯೋದಯಕ್ಕೆ ಆರ೦ಭಗೊ೦ಡು ಮರುದಿವಸ ಕಾರ್ತಿಕ ಶುದ್ಧ ದ್ವಾದಶಿ ಸೂರ್ಯೋದಯಕ್ಕೆ ಏಕಾಹ ಭಜನೆ ಮ೦ಗಳ, ಭಜನಾ ಸಮಿತಿಯಿ೦ದ ನಡೆಯುತ್ತದೆ.