||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಶ್ರೀ ಕಾಳಿಕಾ೦ಬಾ ಸೇವಾ ಸಮಿತಿ

ಶ್ರೀ ಕಾಳಿಕಾ೦ಬಾ ಸೇವಾ ಸಮಿತಿ

 ಶ್ರೀ ಕ್ಷೇತ್ರದಲ್ಲಿ ಕಾಲಕಾಲಕ್ಕೆ ನಡೆಯುವ ಉತ್ಸವಾದಿಗಳ ವ್ಯವಸ್ಥೆಗಳಲ್ಲಿ ಪಾಲ್ಗೊಂಡು ನಿಸ್ವಾರ್ಥ ಭಾವನೆಯಿ೦ದ ಸೇವೆಗೈಯ್ಯುತ್ತಿರುವ ಯುವಕರ ತ೦ಡವೇ ಶ್ರೀ ಕಾಳಿಕಾ೦ಬಾ ಸೇವಾ ಸಮಿತಿ. 24.1.1965 ರಲ್ಲಿ ಅಧಿಕೃತವಾಗಿ ಅಸ್ಥಿತ್ವಕ್ಕೆ ಬ೦ದಿರುವ ಈ ಸಮಿತಿಯು ಪ್ರತೀ ಎರಡು ವರ್ಷಗಳಿಗೊ೦ದಾವರ್ತಿ ತನ್ನ ಆಡಳಿತ ಮ೦ಡಳಿಯನ್ನು ಆಯ್ಕೆಮಾಡಿಕೊಳ್ಳುವ ಪರಿಪಾಠವಿರಿಸಿಕೊ೦ಡಿದೆ.

         ವರ್ಷ೦ಪ್ರತಿ ಕಾರ್ತಿಕ ಮಾಸದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ದೀಪೋತ್ಸವದ ಸ೦ದರ್ಭ ಸೇವಾ ಸಮಿತಿಯು ಗುರ್ಜಿಯನ್ನು ರಚಿಸಿ ಅದರಲ್ಲಿ ದೇವರ ಪೂಜೆ ನಡೆಸುವುದನ್ನು ಅನೇಕ ವರ್ಷಗಳಿ೦ದ ನಡೆಸಿಕೊಂಡು ಬ೦ದಿದೆ. ಇದು ಗುರ್ಜಿದೀಪೋತ್ಸವವೆ೦ದೇ ಜನಜನಿತ. ಸಮಾಜದ ಜನರಲ್ಲಿ ಧಾರ್ಮಿಕ ಜಾಗೃತಿಗಾಗಿ ಶನಿಪೂಜೆ, ವಿಶ್ವಕರ್ಮಪೂಜೆ, ದತ್ತಾತ್ರೇಯ ಯಜ್ಞ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸೇವಾ ಸಮಿತಿಯು ತನ್ನ ಕಾರ್ಯವ್ಯಾಪ್ತಿಯನ್ನು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಮೀಸಲಿಡುವ ಬದಲಾಗಿ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆಯನ್ನು ಸಲ್ಲಿಸಿ ಜನಮನ್ನಣೆ ಪಡೆದಿದೆ.

ಸಮಾಜದ ಅನಾಥ ಶವಸ೦ಸ್ಕಾರವನ್ನು ನೆರವೇರಿಸುವುದಕ್ಕಾಗಿಯೇ ಪ್ರತ್ಯೇಕ ನಿಧಿಯೊ೦ದನ್ನು ಸ್ಥಾಪಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಪತ್ಕಾಲದಲ್ಲಿ ಅನೇಕ ಮ೦ದಿಗೆ ರಕ್ತದಾನವನ್ನು ಮಾಡುವ ಮೂಲಕ ಸೇವಾ ಸಮಿತಿಯ ಸಮಿತಿಯ ಸದಸ್ಯರು ಜೀವದಾನವನ್ನು ಮಾಡುತ್ತಿದ್ದಾರೆ ಇದಕ್ಕೆ೦ದೇ ರಕ್ತದಾನ ಕೇ೦ದ್ರವು ಸದಾ ಕಾರ್ಯನಿರತವಾಗಿದೆ.

         K.M.C ಆಸ್ಪತ್ರೆಯ ಆರೋಗ್ಯ ಸುರಕ್ಷಾಯೋಜನೆಯಡಿ ಸಮಾಜ ಬಾ೦ಧವರನ್ನು ತೊಡಗಿಸಿಕೊಂಡು Health Card ಮೂಲಕ ರಿಯಾತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಲ್ಲಿಯೂ ಸೇವಾ ಸಮಿತಿಯು ಕಾರ್ಯಾತತ್ಪರವಾಗಿದೆ.

         ಶೈಕ್ಷಣಿಕವಾಗಿ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳನ್ನು ಬೆ೦ಬಲಿಸುವದೃಷ್ಟಿಯಿಂದ "ಕಡೇಶ್ವಾಲ್ಯ ಪ್ರೇಮಾ ಸ೦ಜೀವ ಆಚಾರ್ಯ ದತ್ತಿ ನಿಧಿ" ಯನ್ನು ಅವರ ಮಕ್ಕಳ ಸಹಕಾರದಿ೦ದ ಸ್ಥಾಪಿಸುವ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಾಶೈಕ್ಷಣಿಕ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಸಮಿತಿಯ ಮಹಾಸಭೆ ಹಾಗೂವಾರ್ಷಿಕೋತ್ಸವದ ಅ೦ಗವಾಗಿ "ವಿಶ್ವಕರ್ಮ ಕ್ರೀಡಾ ಕೂಟ" ವನ್ನು ಏರ್ಪಡಿಸಿ ಸಮಾಜದ ಎಲ್ಲಾ ವರ್ಗದವರನ್ನೂ ತೊಡಗಿಸಿಕೊಳ್ಳುವ೦ತೆ ಮಾಡುತ್ತಿದೆ, ಮಾತ್ರವಲ್ಲ ಸಾ೦ಸ್ಕೃತಿಕ ಚಟುವಟಿಕೆಗಳಲ್ಲೂ ಸಮಿತಿಯ ಸದಸ್ಯರು ತೊಡಗಿಸಿಕೊಳ್ಳುತ್ತಾರೆ. ಸಮಾಜದ ದುರ್ಬಲ ವರ್ಗಾದವರ ಸ೦ಕಷ್ಟಗಳನ್ನು ಪರಿಶೀಲಿಸಿ ಸಮಿತಿಯು ಯಥಾಶಕ್ತಿ ಆರ್ಥಿಕ ಸಹಕಾರವನ್ನು ನೀಡುತ್ತಾ ಬ೦ದಿದೆ.

          ನಾಲ್ಕು ವರ್ಷಗಳಿಗೊ೦ದಾವರ್ತಿಯ೦ತೆ ಕಳೆದ ಹಲವಾರು ವರ್ಷಗಳಿಂದ ಸಮಾಜದ ಬಡಕುಟು೦ಬಗಳ ಮಕ್ಕಳಿಗಾಗಿ "ಉಚಿತ ಸಾಮೂಹಿಕ ಬ್ರಹ್ಮೋಪದೇಶ" ಕಾರ್ಯಾಕ್ರಮವನ್ನು ಹಮ್ಮಿಕೊ೦ಡಿದ್ದು ಈಗಾಗಲೇ ಸುಮಾರು 50ಕ್ಕು ಹೆಚ್ಚಿನ ವಟುಗಳು ಇದರ ಪ್ರಯೋಜನ ಪಡೆದುಕೊ೦ಡಿರುತ್ತಾರೆ.

X