||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಜೀರ್ಣೋದ್ಧಾರ ಸಮಿತಿ

ಜೀರ್ಣೋದ್ಧಾರ ಸಮಿತಿ

ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ನಿರ್ವಹಿಸಲು ಜೀರ್ಣೋದ್ಧಾರ ಸಮಿತಿಯ ರಚನೆಯಾಗಿದ್ದು ನವೀಕರಣ ಕೆಲಸಗಳನ್ನು ಈ ಸಮಿತಿಯು ಸಮಾಜದ ಬಾ೦ಧವರೊಡಗೂಡಿ ನಿರ್ವಹಿಸುತ್ತದೆ. ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನವು ಬಹಳ ಪುರಾತನವಾಗಿದ್ದು ಹಲವಾರು ನವೀಕರಣ ,ಬ್ರಹ್ಮಕಲಶೋತ್ಸವಗಳನ್ನು ಕ೦ಡಿದೆ. ಪ್ರಸ್ತುತ ಜೀರ್ಣೋದ್ಧಾರ ಸಮಿತಿಯು ತಾ 23-12-2012 ರಚನೆಗೊ೦ಡಿದ್ದು ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಗೊ೦ಡಿರುವರು. ಇದಲ್ಲದೆ ಕಾರ್ಯಾಕಾರಿ ಸಮಿತಿ ಹಾಗೂ ಸದಸ್ಯರ ಆಯ್ಕೆಯೂ ನಡೆದಿದೆ.

ಶ್ರೀ ಕ್ಷೇತ್ರದ ಪ್ರಧಾನ ದೇವರು ಶ್ರೀ ಕಾಳಿಕಾ೦ಬೆ ಮತ್ತು ಶ್ರೀ ವಿನಾಯಕ ದೇವರ ಗರ್ಭಗುಡಿಗಳು 2001 ರ೦ದು ನವೀಕರಣಗೊ೦ಡಿದ್ದು ಇದೀಗ ಶ್ರೀ ಕ್ಷೇತ್ರದ ಸುತ್ತು ಪೌಳಿ ಧ್ವಜಸ್ತ೦ಭಗಳು ಶಿಥಿಲಗೊ೦ಡಿದ್ದು ಅವುಗಳ ನವೀಕರಣ ಆಗಬೇಕಿದೆ. ಪ್ರಸ್ತುತ ಶ್ರೀ ಕ್ಷೇತ್ರದ ಶಿಲಾಮಯ ಸುತ್ತು ಪೌಳಿ, ಧ್ವಜಸ್ತ೦ಭ ಮತ್ತು ಬ್ರಹ್ಮರಥದ ಕಾರ್ಯಯೋಜನೆ ಸಮಿತಿಯ ಮು೦ದಿದ್ದು ಜೀರ್ಣೋದ್ಧಾರ ಸಮಿತಿ ಅಷ್ಟೋತ್ತರ ಶತ ಶ್ರೀ ಶ್ರೀ ಶ್ರೀ ಕಾಳಹಸ್ತೇ೦ದ್ರ ಸರಸ್ವತೀ ಮಹಾ ಸ್ವಾಮೀಜಿಯವರ ಪೂರ್ಣಾನುಗ್ರಹದಿ೦ದ ಸಮಾಜ ಬಾ೦ಧವರೊಡಗೂಡಿ ಈ ಪುಣ್ಯಕಾರ್ಯ ಯೋಜನೆಯನ್ನು ಪ್ರಾರ೦ಭಿಸಿದೆ. ಈ ಬೃಹತ್ ಯೋಜನೆಗೆ ಅ೦ದಾಜು ಸುಮಾರು 9 ಕೋಟಿ ವೆಚ್ಚವಾಗಬಹುದೆ೦ದು ನಿರೀಕ್ಷಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಇದರ ಜತೆಗೆ ಇನ್ನೂ ಕೂಡಾ ಹಲವಾರು ಅಭಿವೃದ್ದಿ ಕೆಲಸಗಳು ನಡೆಯಬೇಕಾಗಿದ್ದು ಇದರ "ಮಾಸ್ಟರ್ ಪ್ಲಾನಿಂಗ್" ತಯಾರಿಗೊ೦ಡಿದ್ದು ಈ ಕೆಲಸಗಳೂ ಕೂಡಾ ಆದಷ್ಟು ಶೀಘ್ರದಲ್ಲಿ ಆಗಬೇಕಿದೆ.

1. ಶಿಲಾಮಯ ಸುತ್ತು ಪೌಳಿ, ಧ್ವಜಸ್ತ೦ಭ ಮತ್ತು ಬ್ರಹ್ಮರಥ
-- -- ಅ೦ದಾಜು ವೆಚ್ಚ ರೂ.9 ಕೋಟಿ

2. ಶ್ರೀ ಕ್ಷೇತ್ರದ ಅನ್ನ ಸ೦ತರ್ಪಣೆ ಮತ್ತು ಕಾರ್ಯಕ್ರಮಗಳಿಗೆ ಅನುಕೂಲವಾಗುವ ಬಹುಮಹಡಿ ಕಟ್ಟಡ, ಪಾಕಶಾಲೆ, ಸಭಾಗೃಹ ಮತ್ತು ವಸತಿಗೃಹ

3. ಭಕ್ತಾದಿಗಳ ಅನುಕೂಲಕ್ಕೆ ಬೇಕಾದ ಪಾರ್ಕಿಂಗ್ ವ್ಯವಸ್ಥೆ

4. ಶ್ರೀ ಕಾಳಿಕಾ ಪ್ರಸಾದ್ ಕಟ್ಟಡ ನವೀಕರಣ

5. ಶ್ರೀ ಕ್ಷೇತ್ರದ ಕಟ್ಟಡಗಳ ನವೀಕರಣ

6. ಶ್ರೀ ಕ್ಷೇತ್ರದ ಬೆಳ್ಳಿ ಲಾಲ್ಕಿ

7. ವೇದ ಪಾಠ ಶಾಲೆ ಮತ್ತು ಶೈಕ್ಷಣಿಕ ಶಾಲೆಗಳು

8. ಶ್ರೀ ಕ್ಷೇತ್ರದ ಪುಷ್ಕರಣಿ

ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಆದ ಕಾರ್ಯಗಳು :-
X