ಶ್ರೀ ಕ್ಷೇತ್ರದ ಕೂಡುವಳಿಕೆಗಳು
ಮ೦ಗಳೂರು ಪೇಟೆ, ಉಳ್ಳಾಲ ಮ೦ಜೇಶ್ವರ ಪೇಟೆ, ಮುಲ್ಕಿ ಮೂಡಬಿದ್ರೆ ಪೇಟೆ, ಬ೦ಟ್ವಾಳ ಪೇಟೆ, ಬೆಳ್ತ೦ಗಡಿ ಪೇಟೆ, ಪುತ್ತೂರು ಪೇಟೆ, ಸುಳ್ಯ ಪೇಟೆ, ಮಡಿಕೇರಿ ಎ೦ಬ ಎ೦ಟು ಪೇಟೆಗಳಲ್ಲಿ ಗ್ರಾಮಗಳಲ್ಲಿರುವ ಕೂಡುವಳಿಕೆಗಳು, ಅಲ್ಲದೆ ಮ೦ಗಳೂರು ಕ್ಷೇತ್ರದಲ್ಲಿ ಖಾಯ೦ ವಾಸಮಾಡಿಕೊ೦ಡಿರುವ ವಿಶ್ವಬ್ರಾಹ್ಮಣರು ಹತ್ತು ಸಮಸ್ತರೆ೦ದು ಎ೦ದು ಕರೆಯಲ್ಪಡುತ್ತಾರೆ.
ಶ್ರೀ ಕ್ಷೇತ್ರವು ಉತ್ತರ ದಿಕ್ಕಿಗೆ ನಡ್ಸಾಲ (ಹೆಜಮಾಡಿ), ಪೂರ್ವಕ್ಕೆ ಕೊಡಗು ಸೀಮೆ, ದಕ್ಷಿಣಕ್ಕೆ ಬ೦ಗ್ರಮ೦ಜೇಶ್ವರ ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರವೆ೦ಬ ಚತುರ್ಗಡಿಗಳನ್ನು ಹೊ೦ದಿದೆ.
ಗ್ರಾಮದಲ್ಲಿರುವ ವಿಶ್ವಬ್ರಾಹ್ಮಣರ ಕುಟು೦ಬಗಳನ್ನು ಗು೦ಪುಗಳಾಗಿ ವಿ೦ಗಡಿಸಿ, ಆ ಗು೦ಪಿಗೆ ಕೂಡುವಳಿಕೆ ಎ೦ದು ಹೆಸರಿಸಲಾಗಿದೆ. ಆ ಗು೦ಪಿನ ಮು೦ದಾಳುವನ್ನು "ಕೂಡುವಳಿಕೆ ಮೋಕ್ತೇಸರ" ಎ೦ದು ಕರೆಯಲಾಗುತ್ತದೆ, ಇ೦ತಹ ಸುಮಾರು 250 ರಷ್ಟು ಕೂಡುವಳಿಕೆಗಳು ಪ್ರಸ್ತುತ ಕಾರ್ಯಾನಿರ್ವಹಿಸುತ್ತಿವೆ. ಶ್ರೀ ಕ್ಷೇತ್ರಕ್ಕೆ ಸ೦ಬ೦ಧಿಸಿದ ಕಾರ್ಯಾಕಲಾಪಗಳನ್ನು ನೋಡಿಕೊ೦ಡು, ಶ್ರೀ ಕ್ಷೇತ್ರದ ಆಡಳಿತ ಮ೦ಡಳಿಗೆ ಸೂಕ್ತವಾದ ಮಾಹಿತಿ, ವಿವರ ಮತ್ತು ಸಹಕಾರವನ್ನೂ ನಿಡುವುದು ಕೂಡುವಳಿಕೆ ಮೋಕ್ತೇಸರನ ಕರ್ತವ್ಯವಾಗಿದೆ.
ಕ್ಷೇತ್ರಗಳಲ್ಲಿ ನಡೆಯತಕ್ಕ ಉತ್ಸವಾದಿಗಳು ಮತ್ತಿತರ ಆಗುಹೋಗುಗಳ, ಕ್ಷೇತ್ರದ ನಿರ್ಣಯ ಇತ್ಯಾದಿಗಳನ್ನು ಸಕಾಲದಲ್ಲಿ ತನ್ನ ಕೂಡುವಳಿಕೆಗೋಳಪಟ್ಟ ಸದಸ್ಯರೆಲ್ಲರಿಗೂ ತಿಳಿಸುವ ಜವಾಬ್ದಾರಿಯು ಇವರದ್ದಾಗಿದೆ ಮಾತ್ರವಲ್ಲ ಪ್ರತಿಯೊಬ್ಬ ಸದಸ್ಯರಿ೦ದಲೂ ಶ್ರೀ ಕ್ಷೇತ್ರಕ್ಕೆ ಸಲ್ಲಬೇಕಾದ ಕಾಲಾವಧಿ ಶಿಸ್ತು, ಕಾಣಿಕೆ, ಗುರುಕಾಣಿಕೆಗಳನ್ನು ಸ೦ಗ್ರಹಿಸಿ ಅಧಿಕೃತ ರಶೀದಿ ನೀಡಿ ಅವುಗಳ ವಿವರ ಸಹಿತವಾಗಿ ಶ್ರೀ ಕ್ಷೇತ್ರಕ್ಕೆ ಸಕಾಲದಲ್ಲಿ ಪಾವತಿಸುವ ಜವಾಬ್ದಾರಿಯು ಇದೆ.