ಶ್ರೀ ಕ್ಷೇತ್ರದ ಉತ್ಸವಾದಿಗಳು, ಇತರ ವಿನಿಯೋಗಾದಿಗಳು, ಪೂಜೆಗಳು, ನಿರ್ವಹಣೆ, ಎಂಟುಪೇಟೆ ಹತ್ತು ಸಮಸ್ತರನ್ನು ಒಟ್ಟು ಸೇರಿಸಿಕೊಂಡು ಶ್ರೀ ಕ್ಷೇತ್ರವನ್ನು ಮುನ್ನಡೆಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷಕ್ಕೊಮ್ಮೆ ಮಹಾಸಭೆಯು ನಡೆಯುತಿದ್ದು ಇದರಲ್ಲಿ ವರದಿ ಲೆಕ್ಕ ಪತ್ರ ತಿದ್ದು ಪಡಿಗಳು ,ಕಾರ್ಯಯೋಜನೆಗಳು ನಡೆಯುತ್ತದೆ. ಆಡಳಿತ ಮಂಡಳಿಯ ಆಯ್ಕೆಯು ಸೂಚನೆ ಅನುಮೊದನೆಗಳಿಂದ ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.ಮೂರು ಜನ ಮೊಕ್ತೇಸರರು ಮತ್ತು ಎಂಟು ಜನ ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ಸಮಿತಿಯು ರಚನೆಯಾಗುತ್ತದೆ.
80 ವರ್ಷಗಳಿಂದ ಆಡಳಿತ ನಡೆಸಿರುವ ಮೊಕ್ತೇಸರರು
| ಕ್ರಮ.ಸ೦ | ಹೆಸರು | ವರ್ಷ |
|---|---|---|
| 1 | ಶ್ರೀ ಬೋಳೂರು ಚಂದ್ರಯ್ಯ ಆಚಾರ್ಯ | 1920 - 1928 |
| 2 | ಶ್ರೀ ಬೋಳೂರು ದಾಸಪ್ಪ ಆಚಾರ್ಯ | 1928 - 1954 |
| 3 | ಶ್ರೀ ಹೆಜಮಾಡಿ ಜನಾರ್ಧನ ಆಚಾರ್ಯ | 1954 - 1959 |
| 4 | ಶ್ರೀ ಪಾಲ್ಕೆ ಬಾಬುರಾಯ ಆಚಾರ್ಯ | 1959 - 1963 |
| 5 | ಶ್ರೀ ಬಿಜೈ ಗೋಪಾಲ ಆಚಾರ್ಯ | 1963 - 1964 |
| 6 | ಶ್ರೀ ಅಡ್ಯಾರ್ ರಮೇಶ ಆಚಾರ್ಯ | 1964 - 1965 |
| 7 | ಶ್ರೀ ಬಾಳ ದಾಮೊದರ ಆಚಾರ್ಯ | 1965 - 1977 |
| 8 | ಶ್ರೀ ಪಂಜಿಕಲ್ ಶ್ಯಾಮರಾಯ ಆಚಾರ್ಯ | 1977 - 1982 |
| 9 | ಶ್ರೀ ಬಯಾರು ಸೀತಾರಾಮ ಆಚಾರ್ಯ | 1982 - 1987 |
| 10 | ಶ್ರೀ ಪಾಲ್ಕೆ ಸದಾಶಿವ ಆಚಾರ್ಯ | 1987 - 1994 |
| 11 | ಶ್ರೀ ಪದವು ಶಿವರಾಮ ಆಚಾರ್ಯ | 1994 - 2002 |
| 12 | ಶ್ರೀ ಪಾಲ್ಕೆ ಯೋಗಿeಶ್ ಆಚಾರ್ಯ | 2002 - 2004 |
| 13 | ಶ್ರೀ ಬೋಳೂರು ರಾಘವೇಂದ್ರ ಆಚಾರ್ಯ | 2004 - 2007 |
| 14 | ಶ್ರೀ ಕೂಟತ್ತಜೆ ಕೇಶವ ಆಚಾರ್ಯ | 2007 - 2012 |
| 15 | ಶ್ರೀ ಕೂಟತ್ತಜೆ ಕೇಶವ ಆಚಾರ್ಯ | 2012 - 2013 |
| 16 | ಶ್ರೀ ಕೆ. ಲೋಕೇಶ್ ಆಚಾರ್ಯ | 2013 - |
| 17 | ಶ್ರೀ ನಾಗರಾಜ ಆಚಾರ್ಯ | - |
| 18 | ಶ್ರೀ ಕೂಟತ್ತಜೆ ಕೇಶವ ಆಚಾರ್ಯ | - |