||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

SHREE KALIKAMBA VINAYAKA TEMPLE, Mangalore

ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನ, ಮ೦ಗಳೂರು

ಶ್ರೀ ಕ್ಷೇತ್ರದ ಉತ್ಸವಾದಿಗಳು

 • ದೀಪಾವಳಿ ಉತ್ಸವ
  ಶ್ರೀ ಕ್ಷೇತ್ರದಲ್ಲಿ ದೀಪಾವಳಿ ಉತ್ಸವ ಆಶ್ವೀಜ ಬಹುಳ ಅಮಾವಾಸ್ಯೆಗೆ ಪ್ರಾರ೦ಭಗೊ೦ಡು ಮೂರು ದಿನ ಪರ್ಯ೦ತ ಬಲೀ೦ದ್ರ ಪೂಜಾ ಸಹಿತವಾಗಿ ಪ್ರತಿ ದಿನ ರಾತ್ರಿ ನಡೆಯುತ್ತದೆ. ದೈವಕ್ಕೆ ತ೦ಬಿಲ ಸೇವೆ ನಡೆಯುತ್ತದೆ.
 • ತುಳಸಿ ಪೂಜಾ ಉತ್ಸವ
  ಕಾರ್ತಿಕ ಶುದ್ದ ಉತ್ಥಾನ ದ್ವಾದಶಿಯ೦ದು ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯ ಉತ್ಸವ ನಡೆಯುತ್ತದೆ.
 • ಶ್ರೀ ಕ್ಷೇತ್ರದ ದೀಪೋತ್ಸವ
  ಕಾರ್ತಿಕ ಶುದ್ದ ವೈಕು೦ಠ ಚತುರ್ದಶಿಯ೦ದು ಮಧ್ಯಾಹ್ನ ಉತ್ಸವ, ರಾತ್ರಿ ದೀಪೋತ್ಸವ, ಬೀದಿ ಸವಾರಿಯಲ್ಲಿ ಶ್ರೀ ಕ್ಷೇತ್ರದಿ೦ದ ದೇವರು ಪಲ್ಲಕ್ಕಿಯಲ್ಲಿ ಹೊರಟು ಶ್ರೀ ಕಾಳಿಕಾ೦ಬಾ ಸೇವಾ ಸಮಿತಿಯವರು ಶೃ೦ಗರಿಸಲ್ಪಟ್ಟ ಗುರ್ಜಿಯಲ್ಲಿ ಶ್ರೀ ದೇವರನ್ನು ಸ್ಥಾಪಿಸಿ ಪೂಜೆ ಪ್ರಸಾದ ವಿತರಣೆ, ಬೀದಿ ಸವಾರಿಯಾಗಿ ಶ್ರೀ ಕ್ಷೇತ್ರದಲ್ಲಿ ಮಹಾಪೂಜೆ.
 • ಪ೦ಚಮಿ ಉತ್ಸವ
  ಮಾರ್ಗಶಿರ ಶುದ್ದ ಷಷ್ಠಿಯ೦ದು ಶ್ರೀ ಕ್ಷೇತ್ರದಲ್ಲಿ ರಾತ್ರಿ ಉತ್ಸವ ಜರಗುತ್ತದೆ.
 • ಷಷ್ಠಿ ಉತ್ಸವ
  ಮಾರ್ಗಶಿರ ಶುದ್ದ ಪ೦ಚಮಿಯ೦ದು ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಉತ್ಸವ ಚ೦ದ್ರಮ೦ಡಲೊತ್ಸವ ಮಹಾಪೂಜೆ ರಾತ್ರಿ ಉತ್ಸವ ಬೀದಿಸವಾರಿ ಪೂಜೆ ಪ್ರಸಾದ ವಿತರಣೆ.
 • ಶಿವರಾತ್ರಿ ಉತ್ಸವಬಲಿ
  ಮಾಘ ಬಹುಳ ತ್ರಯೊದಶಿಯ೦ದು ರಾತ್ರಿ ಶ್ರೀ ಕ್ಷೇತ್ರದಲ್ಲಿ ಉತ್ಸವ ಆಗಿ ಪೂಜೆ ಪ್ರಸಾದ ವಿತರಣೆ.
 • ಪ್ರತಿಷ್ಠಾಮಹೋತ್ಸವ
  ಫಾಲ್ಗುಣ ಬಹುಳ ಬಿದಿಗೆ ಮಧ್ಯಾಹ್ನ ಸಾಮೂಹಿಕ ಕು೦ಕುಮಾರ್ಚನೆ,ಮಹಾಪೂಜೆ ಪ್ರಸಾದ ವಿತರಣೆ ಅನ್ನಸ೦ತರ್ಪಣಿ,ರಾತ್ರಿ ರ೦ಗಪೂಜೋತ್ಸವ.
 • ಯುಗಾದಿ ಮಹೋತ್ಸವ
  ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಚೈತ್ರ ಶುದ್ಧ ಪಾಡ್ಯಕ್ಕೆ ಪ್ರಾರ೦ಭಗೊ೦ಡು ನಿರ೦ತರ 9 ದಿನಗಳ ಉತ್ಸವವಾಗಿ 10ನೇ ದಿನ ಚೂರ್ಣೊತ್ಸವ ನಡೆಯುತ್ತದೆ. ಶ್ರೀ ಅಮ್ಮನವರ ರ೦ಗಪೂಜೋತ್ಸವ, ವಿನಾಯಕ ದೇವರ ರ೦ಗಪೂಜೆ ಮತ್ತು ನಾಲ್ಕೂರು ಪ೦ಜುರ್ಲಿ ದೈವಗಳ ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯುತ್ತದೆ.
 • ಹತ್ತನಾವಧಿ ಉತ್ಸವ
  ವೃಷಭ ಸ೦ಕ್ರಮಣ (ವೃಷಭ ಮಾಸ ದಿನ 10 ಸಲುವ) ದಿ೦ದ ಹತ್ತನೇ ದಿನ ಕ್ಕೆ ಬರುವ೦ತಹ ಹತ್ತನಾವಧಿಯ೦ದು ಶ್ರೀ ಕ್ಷೇತ್ರದಲ್ಲಿ ರಾತ್ರಿ ಉತ್ಸವ ನಡೆಯುತ್ತದೆ.